ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಡಾ.ಹಬೀಬ್ ರಹ್ಮಾನ್ ಸಹಿತ 34 ಮಂದಿಗೆ ಪ್ರಶಸ್ತಿ ಘೋಷಣೆ
Oct 30, 2022
ಮಂಗಳೂರು, ಅ.30: ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿಯನ್ನು ದ.ಕ.ಜಿಲ್ಲಾಧಿಕಾರಿ ಡಾ.ಕುಮಾರ್ ರವಿವಾರ ಪ್ರಕಟಿಸಿದ್ದಾರೆ.
ಮಂಗಳೂರಿನ ಯುನಿಟಿ ಆಸ್ಪತ್ರೆಯ ಅಧ್ಯಕ್ಷ ಡಾ. ಹಬೀಬ್ ರಹ್ಮಾನ್ ಸಹಿತ 34 ಮಂದಿಗೆ ಮತ್ತು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಿತ 20 ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಯದುಪತಿ ಗೌಡ ಪುದುವೆಟ್ಟು (ಸಾಹಿತ್ಯ), ಶೇಖರ ಗೌಡ ಬಜ್ಪೆ (ಸಾಹಿತ್ಯ), ಉತ್ತಮ್ ಕುಮಾರ್ ಜೆ. ಕೋಡಿಯಾಲ್‌ಬೈಲ್ (ಹಿಂದೂಸ್ತಾನಿ ಸಂಗೀತ), ಅಚ್ಯುತ ಮಾರ್ನಾಡು ಬೆಳುವಾಯಿ (ಯಕ್ಷಗಾನ), ಬಂಟ್ವಾಳ ಜಯರಾಮ ಆಚಾರ್ಯ (ಯಕ್ಷಗಾನ), ಕೆ. ನಾರಾಯಣ ಪೂಜಾರಿ ಉಜಿರೆ (ಯಕ್ಷಗಾನ), ಕೇಶವ ಶಕ್ತಿನಗರ (ಕಲೆ),ಮಂಜುನಾಥ ಎಂ.ಜಿ. ಸುಳ್ಯ (ಕಲೆ), ದೇಜಪ್ಪ ಪೂಜಾರಿ ಎನ್. ವಿಟ್ಲ (ಕಲೆ), ಪೂಜಾ ಯು.ಮಂಗಳೂರು